top of page

The Christmas Song

ಮನುಜಾವತಾರಿ ಪರಲೋಕಾಧೀಶ

MANUJAAVATAARI  PARALOKAADHISHA

Our Very First Production. "Manujaavataari Paralokaadhisha" is a Kannada Gospel song written and composed by Rev. Joshua Shantharaj which talks about the Birth of Jesus through The Message of The Cross of our Lord, our Saviour, Jesus.  

The Song

It is truly impossible to celebrate the Birth of Jesus without understanding the preaching of The Cross. Through this Divinely crafted song Rev. Joshua beautifully illustrates the powerful truth of the Gospel and helps us celebrate the birth of our Saviour in a remarkable way. 

Lyrics/ಹಾಡಿನ ಸಾಹಿತ್ಯ

ಮನುಜಾವತಾರಿ ಪರಲೋಕಾಧೀಶ

(ಪಲ್ಲವಿ) 

ಮನುಜಾವತಾರಿ ಪರಲೋಕಾಧೀಶ 

ಶರಣೆಂಬೆ ನಿನಗೆ ಇದು ಭಾಗ್ಯವೆನಗೆ 

ಅನುಗಾಲ ನಿನಗೆ ನಮನವಿದೋ

 

(ಚರಣ 1) 

ಜಗದ ಜನಕನು ನೀನೆ

ಭುವನ ಜ್ಯೋತಿಯು ನೀನೆ

ನರನಾಗಿ ಜನಿಸಿ, ನರರೊಳು ಬದುಕಿ

ನರರ ಉದ್ಧಾರಕನಾಗಿ 

ಇಮ್ಮಾನುವೇಲನಾಗಿ, ಇರುತನಂತನಾಗಿ

(ಚರಣ 2) 

ಕರುಣಾ ಸೋದರ ನೀನೆ

ಒಲವ ಗೆಳೆಯನು ನೀನೆ

ನನಗಾಗಿ ಜೀವ ತ್ಯಜಿಸೆನ್ನ ಪಡೆದ

ಮರಣ ಶೃಂಖಲಬಂಧ ಹರಣ

ನೀನೆಂದು ನನ್ನವನೇ ಈ ಧರಣಿಯೊಳಗೆ.

 

 

ಪದಗಳ ಅರ್ಥ/Meaning

 

ಜನಕ: ತಂದೆ, ಅಪ್ಪ, Father

ಧರಣಿ, ಭುವನ: ಭೂಮಿ, World 

ಶೃಂಖಲೆ: ಸರಪಣಿ, ಸಂಕೋಲೆ, Shackles

ಅನಂತ: ನಿತ್ಯ, Eternal 

ಒಲವು: ಪ್ರೀತಿ, Love 

ಹರಣ: ನಾಶಗೊಳಿಸುವುದು, Destroy

ತ್ಯಜಿಸು: ತೊರೆ, ಬಿಡು, Forsake



 

ರಚನೆ, ರಾಗ ಸಂಯೋಜನೆ,

Written and  Composed By: Rev. Joshua Shantraj 

ಸಂಗೀತ ನಿರ್ದೇಶನ, Music  Arranged, Produced By: Manas Paul JC

bottom of page